Friday, February 16, 2018

ಒಂದು ಊರಲ್ಲಿ ದೇಹ ಅನ್ನುವ ಸಣ್ಣ ಮನೆ ಇರತ್ತೆ.ಮನೆ ಸುಂದರವಾಗಿ ಸಡಗರದಿಂದ ತುಂಬಿರತ್ತೆ ಹೀಗಿರುವಾಗ ಒಂದು ದಿನ ದೇಹ ಅನ್ನುವ ಮನೆಗೆ ಕ್ಯಾನ್ಸರ್ ಅನ್ನುವ ಹುಡ್ಗಿ ಬಾಡಿಗೆಗೆ ಬರತ್ತೆ.

ದೇಹಕ್ಕೆ ಮೊದಲಿಗೆ ಏನು ಅನ್ಸುದಿಲ್ಲ ಆದ್ರೆ ದಿನ ಕಳೆದಂತೆಲ್ಲ ಕ್ಯಾನ್ಸರ್ಗೆ ಬಾಡಿಗೆ ಕೊಟ್ಟಾಗಿನಿಂದ ಮನೆ ಬಡವಾಗ್ತಿದೆ ಅನ್ಸ್ಲಿಕೆ ಶುರು ಆಗುತ್ತೆ ಆದ್ರೆ ದೇಹ ತುಂಬಾ ಸಂಕೋಚ ಸ್ವಭವಾಧು ಅದು ಕ್ಯಾನ್ಸರ್ನ ಏನು ಕೇಳಲ್ಲ ಆದ್ರೆ ಇದೆಲ್ಲದರ ನಡುವೆ ಕ್ಯಾನ್ಸರ್ಗೆ chemotherapy ಅನ್ನುವ ಹುಡ್ಗನ ಜೊತೆ ಪ್ರೀತಿಯಾಗತ್ತೆ.

ನೋಡ್ಲಿಕ್ಕೆ ಸದೃಢವಾಗಿ ಸುಂದರವಾಗಿದ್ದ chemotherapy  ಮತ್ತೆ ಕ್ಯಾನ್ಸರ್ಗೆ ಮದುವೆ ಆಗತ್ತೆ.

ಕ್ಯಾನ್ಸರ್ ಸುಂದರ ಸಂಸಾರದ ಕನಸು ಕಾಣುತ್ತಾ ದೇಹದೊಳಗೆ chemotherapy ಯನ್ನು ಬರಮಾಡಿಕೊಳತ್ತೆ.

ತಿಂಗಳುಗಳು ಉರುಳತ್ತೆ chemotherapy ವಾರಕ್ಕೆ 3 , 4 ಬಾರಿ ಹಿಮೋಗ್ಲೋಬಿನ್, ಪ್ಲೇಟ್ಲೆಟ್ ಅನ್ನುವ ಹಬ್ಬದೂಟ ಕೇಳೋಕೆ ಶುರು ಮಾಡುತ್ತೆ, ಕ್ಯಾನ್ಸರ್ಗೆ ಹೊಡಿಯತ್ತೆ,ಕ್ಯಾನ್ಸರ್ನ ದೇಹದಿಂದ ಹೊರಗೆ ಹಾಕತ್ತೆ..

ಕ್ಯಾನ್ಸರ್ ಮೊದಲಿಗೆ ಒಪ್ಪಿದ್ರು ನಂತ್ರ ಬೇಸತ್ತು ಜಗಳ ಶುರು ಆಗತ್ತೆ.

ದಿನ ಕಳೆದಂತೆ chemotherapy ಯ ಆರ್ಭಟ ಜಾಸ್ತಿ ಆಗತ್ತಾ ಹೋಗತ್ತೆ ಹೀಗೆ 8 ತಿಂಗಳು ಕಳಿಯತ್ತೆ.

 ಒಂದು ದಿನ ಬೆಳಿಗ್ಗೆ ಎಂದಿನಂತೆ chemotherapy ಎದ್ದು ನೊಡತ್ತೆ ಕ್ಯಾನ್ಸರ್ ದೇಹ ಬಿಟ್ಟು ಓಡಿಹೋಗಿರತ್ತೆ chemotherapy ಕಾಟಕ್ಕೆ.

ಇದರಿಂದ chemo ಆಘಾತಕ್ಕೆ ಒಳಗಾಗಿ ಒಂದು ದಿನ ಹೇಳ್ದೆ ಕೇಳ್ದೆ ದೇಹವನ್ನ ಬಿಟ್ಟು ಹೋಗತ್ತೆ..

ಇವರು ಹೋದ ಸ್ವಲ್ಪ ದಿನಕ್ಕೆ ಆರೋಗ್ಯ ಐಶ್ವರ್ಯ ಅನ್ನೋ ದಂಪತಿಗಳು ದೇಹಕ್ಕೆ ಬಂದು ಸರ್ತಾರೆ ದೇಹ ಮತ್ತೆ ಸಂಭ್ರಮದ ಗೂಡಗತ್ತೆ.

ನೋಡಿದವರು ಹೇಳ್ತಾರೆ ಕ್ಯಾನ್ಸರ್ ಎಲ್ಲಿ ಹೋಯ್ತು ಗೊತ್ತಿಲ್ಲ ಅದನ್ನ ಹುಡ್ಕಿ chemotherapy  ಸುಸ್ತಾಗಿ ಫಾರ್ಮಸಿ ಅನ್ನೋ ಆಶ್ರಮ ಸೇರಿದೆ ಅಂತ.  ಇವತ್ತು ಕ್ಯಾನ್ಸರ್ ಮಾಯವಾಗಿದೆ , chemotherapy ಆಶ್ರಮ ಸೇರಿದೆ, ದೇಹ ಆರೋಗ್ಯ ಐಶ್ವರ್ಯ ದಂಪತಿಗಳ ಜೊತೆ ಸುಂದರವಾಗಿ ಕಾಣ್ತಾ ಇದೆ.

Monday, November 14, 2016

ನಮ್ಮದು  ಮಂಗಳೂರು   ಒಳಗೆ  ಒಂದು  ಹಳ್ಳಿ .ಅಲ್ಲಿ  ನಾನು  ಅಣ್ಣ  ,ಅಪ್ಪ ,ಅಮ್ಮ  ಸಣ್ಣ  ಕುಟುಂಬ . 
ಆದ್ರೆ  ನಮ್ಮ   ಮನೆಲಿ  ಟಿವಿ  ಎಲ್ಲ  ಎಂತ  ಇರ್ಲಿಲ್ಲ  ನಮಿಗೆ  ಟಿವಿ  ನೋಡ್ಬೇಕು  ಅಂದ್ರೆ  ನಾವು  ಹತ್ರ  ಇದ್ದ  ಶೆಟ್ಟರ  ಮನೆಗೆ  ಹೋಗ್ತಾ  ಇದ್ದೆವು  ಅಲ್ಲಿ  ಇದ್ದದ್ದು  ಒಂದು  colour   ಟಿವಿ  ಅದು  ನಮಗೆ  ನಮ್ಮ  ಹತ್ರದ   ಮನೆ   ಮಕಳಿಗೆ  ಎಲ್ಲ  ಟಾಕಿಸ್ ಅಂದ್ರೆ  ತಪಾಗ್ಲಿಕ್ಕೆ  ಇಲ್ಲ . 
ನಮ್ಮ  ಮನೆಗಳಲ್ಲಿ  ರೇಡಿಯೋ  ಬರ್ತಾ  ಇತ್ತು  ಅಪ್ಪಯ್ಯ  ರಾತ್ರಿ  news ಕೇಳಲಿಕ್ಕೆ  ಅದನ್ನ  ಉಪಯೋಗಿಸ್ತ  ಇದ್ರೂ  ನಾವು  ಮುಟಿದ್ರೆ  ಬಾಸುಂಡೆ  ಬರುವಹಾಗೆ  ಬಿಳ್ತಾ  ಇತ್ತು .ಯಾಕೆ  ಅಂತ  ಕೇಳಿದ್ರೆ  bangalore  ಇಂದ  ತಂದದ್ದು  ಇಲ್ಲಿ   ಎಲ್ಲ  ಸಿಗುದಿಲ್ಲ  ಮಾರಾಯರೇ  ಅಂತ  ಇದ್ರು .
ನಮಗೆ  ಕೆಲವೊಮ್ಮೆ  ಈ  ಅಪ್ಪಯ್ಯನ  ರೇಡಿಯೋಕಿಂತ  ಶೆಟ್ಟರ  ಟಿವಿ  ಒಳ್ಳೇದು  ಅನ್ಸ್ತ  ಇತ್ತು  ಅದ್ರಲ್ಲಿ  ಬರಿ  ಸೌಂಡ್  ಅಲ್ಲ  picture ಬರ್ತಾ  ಇತ್ತು  ಹೊಸ  ಹೊಸ ದು  ನೋಡ್ತಾ  ಕನಸು  ಕಾಣ್ತಾ  ಇದ್ದೆವು . 
ಕಾರುಗಳು  ಅದ್ರ  ಮೇಲೆ  ಇದ್ದ  ತರ ತರ  ಹೆಸರು  ನಮ್ಮನ್ನು  ಯಾವಾಗ್ಲೂ  ಕೆರಳ್ಹಿಸ್ತ  ಇತ್ತು .ನಂಗು  ಒಂದು  ಕನಸು  ಇತ್ತು  ಅಪ್ಪಯ್ಯ  ನಂತೆ  ಒಮ್ಮೆ  bangalore ಗೆ  ಹೋಗಿ  ಒಂದು  colour colour pant shirt ತೆಕೊಂಡು  ಕನ್ನಡಕ  ಹಾಕೊಂಡು  tv ಅಲ್ಲಿ  ನೋಡಿದಂತ  ಬೆಂಜ್  car ಒಂದು  ತೆಕೊಂಡು  ಅದ್ರಲ್ಲಿ  ರೇಡಿಯೋ  ಹಾಕೊಂಡು  ಬರಬೇಕು  ಅನ್ನುದು ..
ನಂಗೆ  ಶಾಲೆ  ಇರ್ಲಿಲ್ಲ  ಬೆಳಿಗ್ಗೆ  ಎಲ್ಲ  ತೋಟದಲ್ಲಿ  ಅಪ್ಪಯ್ಯಂಗೆ  ಸಹಾಯ  ಮಾಡ್ತಾ  ಇದ್ದೆ .ಮಧ್ಯಾನ  ಒಳ್ಳೆ  ಗಂಜಿ  ಊಟ  ಸಂಜೆ  ಆದ್ರೆ  ಶೆಟ್ರ  ಮನೆ  ಟಿವಿ  ರಾತ್ರಿ  ಮನೆಯಲ್ಲಿ  ಊಟ  ನಿದ್ದ್ದೆ  ಹೀಗೆ  ದಿನಗಳು  ಸಾಗ್ತಾ  ಇತ್ತು .
ಪ್ರತಿದಿನ  ಟಿವಿ  ನೋಡ್ತಾ  ನನ್ನ  colourfull ವೇಷ  ನೆನಪಿಸ್ಕೊಂಡು  ಖುಶಿ ಆಗ್ತಾ  ಇತ್ತು .ಆದ್ರೆ  bangalore ತುಂಬಾ  ದೊಡ್ಡದು  ಅಂತ  ಇದ್ದ  ಅಪ್ಪಯ್ಯ  ಅಲ್ಲಿ  ಹೋಗಿ  car  ಎಲ್ಲ  ತೆಕೊಂಡು  ತರುದು  ಹೇಗೆ  ಇದು  ನಂಗೆ  ಸವಾಲೇ  ಆಗಿತ್ತು ..??
ನಾನು  ಅಪ್ಪಯ್ಯ  ಹತ್ರ  ಮಾತಾಡೋ  ಹಾಗೆ  ಇರ್ಲಿಲ್ಲ  ಇದರ  ಬಗ್ಗೆ.  ಇನ್ನು  ಚಿಗುರು  ಮೀಸೆ  ಬಂದಿರಲಿಲ್ಲ  ಕಂಡಿತ  ಬಾಸುಂಡೆ  ಬರ್ತಾ  ಇತ್ತು  ಕೇಳಿದ್ರೆ …ಎಂತ  ಮಾಡುದು  ಎಷ್ಟು  ದುಡ್ಡು  ಬೇಕಾಗ್ಬೋದು  ಎಂತ  ಗೊತ್ತಿಲ್ಲ  ಯಾರನ್ನು  ಕೆಳುದು ..?
ಏನೇ  ಇರ್ಲಿ  first  ದುಡ್ಡು  ಹೊಂದ್ಸುವ  ಅಂತ  ಅಂದ್ಕೊಂಡು  ಮಲಗಿದೆ .
ಶುರು  ಆಯಿತು  ಅಲ್ಲಿಂದ  ದುಡ್ಡು  ಹೊಂದ್ಸ್ಲಿಕ್ಕೆ  ಎಲ್ಲ  ಕೆಲಸ  ಮಾಡುದು  ಯಾವ  ಕೆಲಸ  ಬಿಡದೆ  ಎಲ್ಲ  ಮಾಡುದೆ  ಇದು   ಅದು  ಇಲ್ಲ ,ಅಪ್ಪಯ್ಯ  ನನ್ನ   ಕಷ್ಟ  ನೋಡಿ  ಖುಷಿ   ಪಟ್ಟ  ಮಗ  ಬೆಳದು  ನಿಂತ  ಅಂತ ..ಎಲ್ಲ  ಕಡೆ  ಹೇಳಿಕೊಂಡು  ತಿರಗ್ತಾ  ಇದ್ದ ..
ನಂಗೆ  ಒಂದು  car ಗೆ  ಎಷ್ಟು  ಬೇಕು  ಅಂತ  ಕೂಡ  ಗೊತ್ತಿಲ್ಲ  ಯಾರನ್ನು  ಕೆಳುದು  ಅಂತ  ಚಿಂತೆ ..ದುಡ್ಡು  ತುಂಬ್ತಾ  ಇತ್ತು  ಜೊತೆಗೆ  ಚಿಂತೆ  ಕೂಡ  ಎಂತ  ಮಾಡುದು  ಹೇಗೆ  ಬೆಂಜ್  ತರದು  ತಂದರೆ  ನಾನೆ  first ಮನೆಗೆ  ತಂದದು ಒಳ್ಳೆ  ಗೌರವ  ಛೆ  ಯಾರದಾದರು  ಕಾಲು   ಹಿಡಿದು  bangalore ಸೇರಬೇಕು  ಅಂತ  ನಿರ್ಧಾರ   ಮಾಡಿದೆ ..ಆಗ  ನೆನಪಿಗೆ  ಬಂದದೆ  ಈ  ತುಳಸಿ  ಊರಿಂದ  ಓಡಿ ಹೋಗಿ  bangalore  ಅಲ್ಲಿ  ಎಲ್ಲೋ  ಇದ್ದ  ಅಂತೆ  ಎಲ್ಲಿ   ಅಂತ  ಯಾರಿಗೆ  ಗೊತ್ತಿಲ್ಲ . 
ಆದ್ರೆ  ಅವನನ್ನು  ಹೇಗೆ  ಹುಡ್ಕ್ಲಿ  ಅನ್ನುದು  ದೊಡ್ಡ  ಸಮಸ್ಯೆ  ಆಗಿತ್ತು ..
ಕೆಲವರು  ಹೇಳ್ತಾ  ಇದ್ರು  ಅವನು  ತಿಂಗಳಿಗೊಮ್ಮೆ  ಊರಿಗೆ  ಬಂದು  ಹೋಗ್ತಾನೆ  ಅಂತ .ಹೌದು  ನಂಗೆ  ಹೊಳಿತು  ಉಪಾಯ  ಅವತಿಂದ  ದಿನ  ಬೆಳಿಗ್ಗೆ  ಬಸ್  ಸ್ಟಾಪ್ಗೆ  ಹೋಗುದು  ಕಾಯುದು ಇವನಿಗೆ .
ಯಾವಾಗ  ಬರ್ತಾನೆ  ಎಂತ  ಗೊತ್ತಿಲ್ಲ  ಆದ್ರೆ  ಕಾಯುದು  ನಾನು  ನಿಲ್ಸ್ಲಿಲ್ಲ  ದಿನ  ಹೋಗಿ  ಅಲ್ಲೇ  ಭಟ್ಟರ  ಅಂಗಡಿಯಲ್ಲಿ  ಒಂದು  ಟೀ ಕುಡ್ದು  ಮಾತಾಡ್ತಾ  ನಿಲ್ಲುದೆ  ಕಾಯಕ  ಆಯಿತು ..
ದಿನಗಳು  ಕಳೀತು  ಆಸಾಮಿಯ  ಪತ್ತೆ  ಇಲ್ಲ  ಮಾರಾಯ  ಎಂತ  ಮಾಡುದು  ಎಲ್ಲಿ  ಹುಡ್ಕುದು  ನನ್ನ  ಆಸೆ  ಈ  ಜನ್ಮಕ್ಕೆ  ಆಗಲಿಕ್ಕೆ  ಇಲ್ಲ  ದೇವೆರೇ  ಅಂತ  ಬಸ್  ಸ್ಟಾಂಡ್  ಇಂದ   ಹೊರಡುವಾಗ  ಭರ್ರ್  ನೆ  ದೂಳು  ಎಬ್ಬಿಸ್ತ  ಬಂತು  ಕೆಂಪು  ಬಿಳಿ  ಬಸ್ಸು .
ಬಸ್ಸು  ಕಂಡ  ತಕ್ಷಣ ಅನ್ಕೊಂಡೆ  ಬೇವರ್ಸಿ  ತುಳಸಿ  ಇದ್ರಲ್ಲಿ  ಆದರು  ಇರು  ಮಾರಾಯ  ಅಂತ .
ನನ್ನ  ಕೂಗು  ದೇವೆರಿಗೆ  ಕೇಳಿತ್ತು  ಅಂತ  ಕಾಣ್ತು  ಕೊನೆಗು  dark ಕೆಂಪು  ಶರ್ಟ್  ಅದಕ್ಕೆ  ಒಪ್ಪುವಷ್ಟೇ  ಹಳದಿ  ಬಣ್ಣದ  ಪ್ಯಾಂಟ್  ಒಂದು  ದೊಡ್ಡ  ಪಿಂಕು  ಕನ್ನಡಕ  ತಲೆಗಿಂತ  ಸ್ವಲ್ಪ  ದೊಡ್ಡದು  ಅನ್ನಬೋದು  ಒಂದು  ರೌಂಡು  ಟೊಪ್ಪಿ  ಕಾಲಲ್ಲಿ  ಒಂದು  ಕಂದು  ಬಣ್ಣದ  ದೊಡ್ಡ  shoe ಹಾಕೊಂಡು  ಕೈಯಲ್ಲಿ  ಬಣ್ಣ  ಬಣ್ಣ  ದ  ಒಂದು  ಬ್ಯಾಗ್  ಹಿಡ್ದು  ಇಳ್ದೆ  ಬಿಟ್ಟ  ತುಳಸಿ ..
ನಾವೆಲ್ಲಾ  ಅವನ  ವೇಷ  ನೋಡ್ತಾ  ಹಾಗೆ  ಬಾಯಿ  ಬಿಟ್ಟು  ನಿಂತಿದ್ದೆವು  ಅವನು  ಭಟ್ರ   ಹೋಟೆಲ್ಗೆ  ಬಂದು  ಇಂಗ್ಲಿಷ್  ಅಲ್ಲಿ  ಅದೇನೋ  ಒನ್  butter milk ಅಂತ  ಕೇಳಿದ  ನಮ್ಮ  ಭಟ್ರು  ಒಂದು  butter ಮತ್ತೆ  ಹಾಲು  ಕೊಟ್ರು  (butter ಅಂದ್ರೆ  kind of biscut ) 
ತುಳಸಿ  ಭಟ್ರಿಗೆ  ಏನೋ  ಅಂದು  ಕನ್ನದಲ್ಲಿ  ಮಜ್ಜಿಗೆ  ಕೇಳಿ  ಕುಡ್ದ  ಆಮೇಲೆ  ನನ್ನ  ಕಡೆ  ತಿರ್ಗಿ  hw r u ಅಂದ  ನನಗೋ  ಇಂಗ್ಲಿಷ್  ನ  ಕುಂಡೆ  ಬಾಯಿ  ಗೊತ್ತಿಲ್ಲ  ಹಾ  ಅಂತ  ಪೆಚ್ಚಾಗಿ  ನಕ್ಕೆ .
ತುಳಸಿ  ಬಂದು   bangalore ವರ್ಣನೆ  ಶುರು  ಮಾಡಿದ  ಹಾಗೆ  ಇರತ್ತೆ  ,ಹೀಗೆ  ಇರತ್ತೆ  ನೀನು  ನೋಡಿದ್ರೆ  ಅಷ್ಟೇ    ಮಾರಾಯ  ಅಂತ  ಎಲ್ಲ  ನನ್ನ  ಆಸೆ  ಇನ್ನು  ಜಾಸ್ತಿ  ಮಾಡಿದ  ನನಗೋ  ಫಸ್ಟ್ ಇತ್ತು  ಹೋಗ್ಬೇಕು  ಅಂತ  ಈಗ  ಇನ್ನು  ಜಾಸ್ತಿ  ಆಗಿ   ಮನಸ್ಸು  ಕುಣಿಲಿಕ್ಕೆ  ಶುರು  ಆಯಿತು  ಛೆ  ಹೇಗೆ  ಆದರು  ಮಾಡಿ  ಈ  ಸಲ  ಇವನ  ಒಟ್ಟಿಗೆ  bangalore ಗೆ  ಹೋಗ್ಬೇಕು  ಮಾರಾಯ ….
ಸರಿ  ದಾರಿ  ಉದ್ದಕ್ಕೂ  ಹರಟ್ತ  ಹೊರಟೆವು   ಹಾಗೆ  ನಾನು  ನನ್ನ   ಆಸೆ  ಹೇಳಿದೆ  ಹೀಗೆ  ಬರಬೇಕು  ಅಂತ  ಎಲ್ಲ  ಇದೆ  ಒಂದು  30,000 ಕೂಡಿಸಿದೇನೆ  ಮಾರಾಯ  ಕರ್ಕೊಂಡು  ಹೋಗು  ಅಂತ ..
ತುಳಸಿ  ನಿಂತು  ಏನೋ  ಯೋಚನೆ  ಮಾಡಿ  ಬೆಂಜ್  ಬೇಕಲ್ಲ  ಸಿಗ್ತದ  ಒಳ್ಳೆ   ಗಾಡಿ  ಕೊಟ್ಟು  ಕಳಿಸ್ತೇನೆ  ಅಂತ  ಹೇಳಿದ .ನನಗೋ  ಖುಷಿ  ನನ್ನ  ಕನಸು  ಇಸ್ತ್ರಲ್ಲೇ  ನಿಜ  ಆಗಲಿಕ್ಕೆ  ಇತ್ತು ..ಆ  ಕ್ಷಣಕ್ಕೆ  ತುಳಸಿ  ದೇವರಂತೆ  ಕಂಡ  ಕಣ್ಣಿಗೆ .  ಸರಿ  ಮನೆಗೆ  ಹೋಗಿ  ಅಪ್ಪಯ್ಯ  ಹತ್ರ  ಎಲ್ಲ  ಹೇಳಿದೆ  bangalore ಗೆ  ಹೋಗಿ  ಬರ್ತೇನೆ  ಅಂತ . ಕಾರನ  ಬಗೆ  ಹೇಳಲಿಲ್ಲ .
ರಾತ್ರಿ  ಪೂರ್ತಿ  ನಿದ್ದೆ  ಇಲ್ಲ  ನಾನು  ಬೆಂಗಳೂರು  ಇಂದ  ಕಾರಲ್ಲಿ  ಬರುದು  ಇಲ್ಲಿ  ಊರೆಲ್ಲ  ಸುತ್ತುದು  ಎಲ್ಲ  ಕೆಳುದು  ರೇಡಿಯೋ  ಉಂಟಾ  ಅಂತ  ನಾನು  ಹಾಕಿ  ತೊರ್ಸುದು  ಹೀಗೆ  ರಾತ್ರಿ  ಎಲ್ಲ  ಕನಸಲ್ಲೇ   ಕಳದೆ .
ಹಾಗೋ  ಹೇಗೊ  ಬೆಳಿಗ್ಗೆ  ಆಯಿತು  ನಾನು  ಎದ್ದು  ಎಲ್ಲ  ಕೆಲಸ  ಬೇಗ  ಮುಗಿಸಿ  ಬಸ್  ಸ್ಟಾಪ್  ಗೆ  ಓಡಿದೆ …
ತುಳಸಿ  ರೆಡಿ  ಆಗಿ  ನಿಂತಿದ್ದ  ಸರಿ   ಇಬ್ರು  ಬಸ್ಸು  ಹತ್ತಿ  ಹೊರಟೆವು  ನಂಗೆ  ಒಳಗೆ  ಒಳಗೆ  ಖುಷಿ  ಖುಷಿ  ಅಲ್ಲಿ  ಯಾವಗ  ನಿದ್ದೆ  ಬಂತೋ  ತುಳಸಿ  bangalore ಬಂತು  ಅಂತ  ಹೇಳಿದಾಗಲೇ   ಎಚ್ಚರ  ಆದದು .
 ಎದ್ದು  ನೋಡಿದ್ರೆ  ಎಷ್ಟು  ದೊಡ್ಡ  ಜಾಗದಲಿ   ಪೂರ್ತಿ  ಬಸ್ಸುಗಳು ಅದು ಕೆಂಪೇಗೌಡ ಬಸ್ ನಿಲ್ದಾಣ ಅಂತೆ ತುಳಸಿ ಸಮಜಾಯಿಷಿ ನೀಡಿದ .  ಜನ   ಅಬ್ಬ  ಕಣ್ಣೆದುರು   ಟಿವಿ  ಓಡಿದ  ಹಾಗೆ  ಇತ್ತು  ನಂಗೆ ..ತುಳಸಿ  ಅಂದ  ಇವತ್ತು  ಎಲ್ಲ  ತೆಕೊಂಡು  ನಾಳೆ  ವಾಪಸು  ಹೋಗುವ  ಅಂತ  ಸರಿ  ಅಂದೆ.
colour  colour ಶರ್ಟ್  ಪ್ಯಾಂಟ್  ಎಲ್ಲ  ಆಯಿತು .ಹಾಕೊಂಡು  ಕಾರು  ನೋಡ್ಲಿಕ್ಕ್ಕೆ  ತುಳಸಿಯಾ  ಫ್ರೆಂಡ್ನ  ಅಂಗಡಿಗೆ  ಹೋದೆವು  ಒಳ್ಳೆ  ಗಾಡಿಗಳು  ಇತ್ತು  ನಂಗೆ  ಹೆಸರು  ಕೂಡ  ಗೊತ್ತಿಲ್ಲ  ಆದ್ರೆ  ಬೆಂಜ್  ಗಾಡಿಯಾ  ಮೇಲೆ  ಮಾರ್ಕ್  ಇರತ್ತೆ  ಚಕ್ರದ್ದು  ಅಂತ  ಯಾರೋ  ಹೇಳಿದ್ರು  ಅದನ್ನ  ಹುಡ್ಕ್ತ  ಹೋದೆ  ಕೊನೆಗು  ಮೂಲೆ  ಅಲ್ಲಿ  ಕಾಣ್ತು  ನನ್ನ  ಕಾರು .ತುಳಸಿ  ಹೇಳಿದ  ನೀನು  ಹೇಳಿದ  ಕೂಡ್ಲೇ  ಇದು  ಬುಕ್  ಮಾಡ್ಸಿದೆ  ಅಂತ  ತುಳಸಿ  ದೇವೇರ  ಅಪರಾವತವಾಗಿ  ಕಂಡ .ಕಾರು  ತಂದು  ಹೊರಗೆ  ಕೊಟ್ಟು  ನಾನ್ನ  ಕೈ  ಇಂದ  ಬೆರಳಚ್ಚು  ಎಲ್ಲ  ತೆಗೊನ್ದರು  ಅದೇನೋ   ಮನೆಗೆ  ಕಲ್ಸಿತೇವೆ  ಅಂದ್ರು  ಅದ್ಯಾವ್ದು  ನಂಗೆ  ಬೇಕಾಗಿ  ಇರ್ಲಿಲ್ಲ  ಕಾರು  ಬಂದದೆ  ಕುಶಿ  ಆಗಿತ್ತು ..
ಈಗ  ಇದ್ದ  ಸಮಸ್ಯೆ  ನಂಗೆ  ಗಾಡಿ  ಓಡ್ಸ್ಲಿಕ್ಕೆ  ಬರ್ತಾ  ಇರ್ಲಿಲ್ಲ   ಎಂತ  ಮಾಡುದು  ತುಳಸಿಗೆ  ಓಡ್ಸ್ಲಿಕ್ಕೆ   ಬರ್ತದೆ  ಅಂತ  ಅವನು  ಕರ್ಕೊಂಡ್  ಹೋಗ್ತೇನೆ  ಅಂದ  ಎಲ್ಲ  ಸೂತ್ತಿ  ರಾತ್ರಿ  ಕಾರಲ್ಲೇ  ಮಲಗಿದ್ದು  ಆಯಿತು  10000 ತುಳಸಿ  ಕೊಟ್ಟ  ಅಂತೆ  ಊರು  ಮುಟ್ಟಿದ   ಕೂಡ್ಲೇ  ಕೊಡ್ತೇನೆ  ಅಂದೆ .
ಮರುದಿನ  ಊರಿಗೆ  ಹೊರಟೆವು  ಊರಲ್ಲಿ  ಎಲ್ಲ  ನೋಡುದೆ  ನೋಡುದು  ಕಾರಲ್ಲಿ  ದೊಡ್ದಕ್ಕ್ಕೆ  ಸೌಂಡ್  ಕೊಟ್ಟು  ರೇಡಿಯೋ  ಹಾಕಿ  ನಾವು  ಹೋಗುದು  ಸರಿ  ಆಗಿ  ಇತ್ತು . ನಮ್ಮ  ಮನೆ  ಮುಂದೆ  ಕಾರು  ನಿಲ್ತು  ಅಪ್ಪಯ್ಯ  ಯಾರು  ಅಂತ  ನೋಡ್ತಾ  ಇದ್ರು  ನನ್ನ   ವೇಷ  ಅವರಿಗೆ  ಗೊತಾಗ್ಲಿಲ್ಲ  ಆದ್ರೆ  ಗೊತಾದ್   ಮೇಲೆ  ಖುಷಿ   ಪಟ್ರು  ಹೀಗೆ  ದಿನ  ಕಳೀತು .
ತುಳಸಿಗೆ  ದುಡ್ಡು  ಕೊಟ್ಟು  ಕಳ್ಸಿದೆ .
ದಿನ  ಕಳೀತು   ನಂಗೆ  ಕಾರು  ಓಡ್ಸುದು  ಬರಲೇ  ಇಲ್ಲ  ಕಾರು ನಿಂತಲ್ಲೇ  ನಿಂತು  ದೂಳು  ಹಿಡಿಲಿಕ್ಕೆ  ಶುರು  ಆಯಿತು .
ರೇಡಿಯೋ  ಕೂಡ  ನಿಂತು  ಹೋಯಿತು  ಅದೇನೋ  battery ಮುಗಿತು  ಅಂತೆ  bangalore ಇಂದ  ತರಲಿಕ್ಕೆ  ಹೇಳಿದ್ರು  ನಾನು  ಹೋಗಲೇ  ಇಲ್ಲ .
 ಜನಕ್ಕೆ  ಕಾರು  normal ಆಯಿತು  ನಂಗೆ  ಮದುವೆ ಆಯಿತು  ಮಕ್ಕಳೈತು  ಮಕ್ಳು  ಕಲ್ತು  ಕಾರು   ಮನೆ  ಎಲ್ಲ  ಮಾಡಿದ್ರು . ಬೆಂಜ್   ಕಾರು   ಮಾತ್ರ  ಅಲ್ಲೇ  ನಿಂತಿತ್ತು  ಆದ್ರೆ  ಈಗಲೂ  ಬಡ್ಡಿ  ಮಗ  ತುಳಸಿಯನ್ನು  ಹುಡ್ಕ್ತ  ಇದೇನೇ  ಮಾರಾಯ  ಅಲ್ಲ  ನಾನು  ಕೇಳಿದ್ದು  ಬೆಂಜ್  ಅನ್ನು  ಅವನು  ಯಾವ್ದೋ  ಬೇರೆ  ಕಾರ  ಕೊಡ್ಸಿ  ಬೆಂಜ್  ಚಕ್ರ  ಅಂಟಿಸಿದ್ದು  ಅಲ್ಲದೆ  10000  ಬೇರೆ  ತೆಕೊಂಡು  ನನ್ನ  ಬಕ್ರ  ಮಾಡಿ  ಹೋಗಿದ್ದ  ಈಗಲೂ  ಮಕ್ಳು  ನನ್ನ  ಕತೆ  ಕೇಳಿ  ನಗ್ತಾರೆ  ಅಪ್ಪಯ್ಯನ   ಬೆಂಜ್  ಅಂತ  ಅದ್ರಲ್ಲಿ  ಬರ್ದ್  ಕೂಡ  ಇಟ್ಟಿದಾರೆ   ಕರ್ಮ   ಮಾರಾಯ .

ರಾತ್ರಿ ಸುಮಾರು 12:30 ಆಗಿರಬಹುದು..ಈಗ ತಾನೆ ಮಳೆ ನಿಂತಿದೆ ವಿಚಿತ್ರ ಅಂದ್ರೆ ಅಲ್ಲಿಗೆ ಇರೋದು ಅಲ್ಲಿ ಕಾಣ್ತಾ ಇರೋ ಅದೊಂದೇ ಗೆಸ್ಟ್ ಹೌಸ್."ಏನೇ ಇರ್ಲಿ ರಾತ್ರಿ ಕಳಿಲಿಕ್ಕೆ ಒಂದು ನೆಲೆ ಸಿಗ್ತಲ್ಲ ಅಷ್ಟು ಸಾಕು"
ನಾನು ನಡೀತಾ ಇದ್ರೆ ನನ್ನ ಹೆಜ್ಜೆ ಶಬ್ದದ ಜೊತೆಗೆ ಮಳೆ ನೀರ ಹನಿ ಬಿಳ್ತಾ ಇರೋ ಶಬ್ದ ನಾನೆ ಬೆಚ್ಚುವಂತೆ ಮಾಡಿದ್ದೇನೋ ನಿಜ.
ಕೊನೆಗೂ ಗೆಸ್ಟ್ ಹೌಸ್ ಮುಟ್ಟಿದ್ದು ಆಯಿತು ಮಳೆಗೆ ನೆಂದಿದ್ದೆ ಬಟ್ಟೆ ಎಲ್ಲ ಒದ್ದೆ ಆಗಿತ್ತು ಗೆಸ್ಟ್ ಹೌಸ್ ಒಳಗೆ ಕಾಲಿಟ್ಟಿದ್ದೆ ತುಂಬಾ ಚಳಿ ಅನ್ಸ್ತು infact ಚಳಿ ಜಾಸ್ತಿ ಆಯಿತು ಅಂತಾನೆ ಅನ್ಬೋದು..!ಇದೇನು ವಿಚಿತ್ರ ಇಷ್ಟು ಹೊತ್ತು ಎಲ್ಲ ಸರಿ ಇತ್ತು..!
"ಏನೇ ಇರ್ಲಿ ಯೋಚನೆ ಮಾಡೋ ಸಮಯ ಇದಲ್ಲ ಇಲ್ಲೇ ಇದ್ರೆ ಚಳಿಗೆ ನನ್ನ ಹೆಣ ಬೀಳತ್ತೆ ಅಷ್ಟೇ" ನನ್ನ ಯೋಚನೆಗೆ ನಂಗೆ ನಗು ಬಂತು.
ರಾತ್ರಿ ತುಂಬಾ ಹೊತ್ತು ಆಗಿದೆ ನಿದ್ದೆ ಬರ್ತಾ ಇದೆ ಬೆಳಿಗ್ಗೆ ಎದ್ದು ಬೇಗ ಹೊರಡೋಣ ಅನ್ಕೊಂಡು ಒಳಗೆ ಹೋದೆ.
ಅರೆ..! ಇವನಿಗೆ ಏನ್ ಆಗಿದೆ ಇವನ ಕಣ್ಣಲ್ಲಿ ನಿದ್ದೆ ಕೂಡ ಕಾಣ್ತಾ ಇಲ್ಲ .."sir ಒಂದು ರಾತ್ರಿ ಇಲ್ಲಿರ್ಲಿಕ್ಕೆ ಜಾಗ ಸಿಗತ್ತಾ..?"
ಇವನು ಯಾಕೆ ನನ್ನ ವಿಚಿತ್ರವಾಗಿ ನೋಡ್ತಾ ಇದಾನೆ..
"ಸರಿಯಾಗಿ ಯೋಚನೆ ಮಾಡಿ ಕೇಳ್ತಾ ಇದ್ದೀರಾ..?"
ಇವನು ಯಾಕೋ ತಲೆ ತಿಂತಾನೆ ಅನ್ಸ್ತು ಆದರು ಮಾತ್ ಆಡ್ಸದೆ.."ನಂಗೆ ಚಳಿ ಆಗ್ತಾ ಇದೆ ನೀವು ಮನುಷ್ಯರ ತರ ಕಾಣ್ತಾ ಇಲ್ಲ ಈ ಚಳಿಲಿ ಇಷ್ಟು ಆರಂ ಆಗ್ ಕೂತಿದ್ದಿರ" ಅವನು ತಲೆ ಎತ್ತಿ ನನ್ನ ಮುಖವನ್ನು ಗಂಭೀರವಾಗಿ ನೋಡಿದ ಆ ನೋಟಕ್ಕೆ ಬೆಚ್ಚಿ ಸುಮ್ಮನಾದೆ.ಹೊರಗೆ ಎಲ್ಲೋ ನೋಡ್ತಾ ನಿತ್ಕೊಂಡೆ.
ಆಗ ಅವನೇ "ಕೀ ತೆಗೊಳ್ಳಿ" ಅಂದ ಈಗ ಅವನ ಮುಖ ಅಷ್ಟು ಗಂಭೀರ ಕಾಣಲಿಲ್ಲ. ಕೀ ತೆಗೊಳ್ಳಿ ಅಂದ ಆದ್ರೆ ಕೀ ಕೆಳಗೆ ಇತ್ತು ಕೈಗೆ ಕೊಡಲಿಕ್ಕೆ ಏನು ರೋಗ..?ಈ ಜನಕ್ಕೆ ಅಷ್ಟು ಸೌಜನ್ಯ ಎಲ್ಲಿಂದ ಬರಬೇಕು ಅನ್ಕೊಂಡು ಕೀ ತೆಗೊಂಡು ರೂಂ ಗೆ ಹೋದೆ ಚಳಿ ಯಾಕೋ ಜಾಸ್ತಿನೇ ಆಗ್ತಾ ಇದೆ ಬಟ್ಟೆ ಬದಲಾಯಿಸೋಣ ಅಂತ ಅನ್ಕೊಂಡಾಗ ಅಲ್ಲೇ ಇದ್ದ paper ಗಾಳಿಗೆ ತುಂಬಾನೆ ಶಬ್ದ ಮಾಡ್ತಾ ಇದೆ ಅನ್ಸ್ತು ಸರಿ ಅದು ನನ್ನ ನೋಡು ಅಂತ ಇದೆ ಅಂತ ಅನ್ಸಿ ಅದ್ರ ಹತ್ರ ಹೋಗಿ ನೋಡ್ದೆ ಆರು ವರ್ಷ ಹಳೇ paper ಆದರು ಎಷ್ಟು ಚನಾಗ್ ಇಟ್ಟಿದಾರೆ ಅನ್ಕೊಂಡೆ.
ಮೊದಲ ಪುಟದಲ್ಲೇ ನಾನು ಉಳ್ಕೊಂಡ ಗೆಸ್ಟ್ ಹೌಸ್ ಫೋಟೋ ಮೇಲೆ "ದುರಾಂತ್ಯ ಕಂಡ ಗೆಸ್ಟ್ ಹೌಸ್" ಅಂತ ಇತ್ತು. ಓದಲಿಕ್ಕೆ boring ಅಂತ ಅವನ ಹತ್ರಾನೆ ಕೇಳೋಣ ಅನ್ಕೊಂಡು ಹೊರಗೆ ಬಂದ್ರೆ ಅಸಾಮಿಯ ಪತ್ತೆನೇ ಇಲ್ಲ.."ಈ ರಾತ್ರಿ ಎಲ್ಲಿಗೆ ಹೋದ ಇವನು..?ರೀ ಬನ್ನಿ ಇಲ್ಲಿ ಒಂದ್ನಿಂಶ.."ಯಾರು ಇಲ್ಲ ಈ ಇಡೀ ಗೆಸ್ಟ್ ಹೌಸ್ ನಲ್ಲಿ ನಾನು ಒಬ್ನೇ ಇದ್ದೀನಿ ಸರಿ ಕಾಯೋಣ ಬಂದ್ರೆ ಕೇಳಿ ಆಮೇಲೆ ಮಲ್ಕೊಳ್ಳೋಣ ಅನ್ಕೊಂಡು ಗಡಿಯಾರ ನೋಡ್ತಾ ಕೂತ್ಕೊಂಡೆ.
ಹೊರಗೆ ಮಳೆ ಜೋರಾಗ್ತಾ ಇತ್ತು ಗುಡುಗು ಮಿಂಚಿನ ಶಬ್ದ ಮನಸಿಗ್ಗೆ ಭಯ ಶುರು ಆಯಿತು ಜೊತೆಗೆ 2 ಘಂಟೆ ಅಂತ ಗಡಿಯಾರ ಶಬ್ದ ಮಾಡಿ ಭಯ ಜಾಸ್ತಿ ಮಾಡ್ತು.
"ಇನ್ನು ಇವನಿಗೆ ಕಾಯೋದ್ರಲ್ಲಿ ಅರ್ಥ ಇಲ್ಲ ಮನೆಗೆ ಹೋದ ಅನ್ಸತ್ತೆ ಸುಮ್ನೆ ಕೂರೋಬದ್ಲು ನಾನು ಹೋಗಿ ಓದಿ ನಂತರ ನಿದ್ದೆ ಮಾಡಿದ್ರೆ ಆಯಿತು" ರೂಂ ಸೇರಿದ ಮೇಲೆ ಸ್ವಲ್ಪ ಸಮಾಧಾನ ಅನ್ಸ್ತು ಆದ್ರೆ ಇಡೀ ಗೆಸ್ಟ್ ಹೌಸ್ ನಲ್ಲಿ ನಾನು ಒಬ್ನೇ ಇದ್ದೇನೆ ಅನ್ನೋ ಭಯ ಒಳಗೆ ಇತ್ತು ನಿದ್ದೆ ಅದ್ಯಾವಗಲೋ ಹಾರಿ ಹೋಗಿತ್ತು.
paper ಪುನಃ ನೋಡ್ದೆ ಓದ್ಬೇಕ ಅಂತ ಮನಸಿಗ್ಗೆ ಅನ್ಸ್ತು.. ಆದರು ಓದಿ ಬಿಟ್ರೆ ಮನಸ್ಸು ಹಗುರಾಗತ್ತೆ ಅಂತ ಓದಲಿಕ್ಕೆ ಶುರು ಮಾಡ್ದೆ.
ಒಂದನೇ ಪುಟ ತಿರುವಿ ಎರಡನೇ ಪುಟಕ್ಕೆ ಹೋದೆ ಮಾತೆ ನಿಂತು ಹೋಯಿತು..!
ಅಸ್ಟರಲ್ಲಿ ಅವನು ಬಂದು "sir may i help u" ಅಂತ ಕೇಳದ ಅಷ್ಟೇ ನೆನಪು..

ಬೆಳಿಗ್ಗೆ ಎಚ್ಚರವಾದಾಗ ಅಲ್ಲಿ ಜನ ಸೇರಿದ್ದರು ಸಮಾದಾನ ಆಯಿತು ಜನ ಇದಾರೆ ಅಂತ ಆಗ ನನ್ನ "ದೇಹ"ನ ಪೋಲಿಸ್ ಎತ್ಕೊಂಡು ಹೋಗ್ತಾ ಇದ್ರು..!
ಆಗ ನೆನಪಿಗೆ ಬಂತು ನಡೆದ ಘಟನೆ..
paperನ ಎರಡನೇ ಪುಟದಲ್ಲಿ ಆ ದುರಂತದಲ್ಲಿ ಪ್ರಾಣ ಕಳಕೊಂಡವರ ಭಾವಚಿತ್ರ ಪ್ರಕಟವಾಗಿತ್ತು..
ಮೊದಲ ಚಿತ್ರ ನಂಗೆ ಕೀ ಕೊಟ್ಟ ವ್ಯಕ್ತಿಯದಾಗಿತ್ತು..
ಆಗ ಅವನ ಮುಖ ದರ್ಶನ ನಂಗೆ ಆಗಿತ್ತು ಅದು ನನ್ನ ಹೃದಯ ಬಡಿತ ನಿಲ್ಲಿಸಿ ನನ್ನ ಸಾವಿಗೆ ಕಾರವಾಗಿತ್ತು..!
ಈಗ ಎಲ್ಲ ಅರ್ಥ ಆಗಲಿಕ್ಕೆ ಶುರು ಆಯಿತು..ಗೆಸ್ಟ್ ಹೌಸ್ ಒಳಗೆ ಹೋಗ್ತಾ ಇದ್ದ ಹಾಗೆ ಬದಲಾದ ವಾತಾವರಣ,ಅವನ ಆ ಗಂಭೀರ ನೋಟ,ಹಳ್ಳಿಗರ ಪ್ರಶ್ನೆ "Sir ರಾತ್ರಿ ಹೋಗಲೇ ಬೇಕ..?"
ಆ ಪ್ರಶ್ನೆ, ಆ ವಾತಾವರಣ, ಈ ಕಾಡು ಎಲ್ಲ ನಿಗೂಢ ಅಂತ ಮನಸ್ಸಿನಲ್ಲಿ ಅನ್ಸ್ತು..!

-Anup Bhat

ನಮಸ್ತೆ ಇವತ್ತು ನಾವು ಎಲ್ಲ ಜಗತ್ತಿನ ಮಾರಕ ಕಾಯಿಲೆಗಳ ಬಗ್ಗೆ ಚಿಂತೆ ಮಾಡ್ತಾ ಇದ್ದೇವೆ ಅದ್ರಿಂದ ಸೇಫ್ ಆಗ್ ಇರೋದ್ರ ಬಗ್ಗೆ ನೋಡ್ತಾ ಇದ್ದೇವೆ.
ಆದ್ರೆ ಇದೆಲಕ್ಕಿಂತ ಇನ್ನು ದೊಡ್ಡ ಕಾಯಿಲೆ ನಮ್ಮ ಯುವ ಜನತೆಗೆ ಬಂದಿದೆ ಅಂದ್ರೆ ನಮ್ಬತಿರ ಇಲ್ಲ ಪ್ರೂಫ್ ಕೇಳ್ತಿರಾ ತಾನೆ..!!
ನಾವು ಇರೋದೇ ಹೀಗೆ ಸುಮ್ನೆ ನಂಬಲ್ಲ ನಂಬಿದ್ರೆ ಬಿಡಲ್ಲ ಇದು ಒಂದ್ತಾರ ಒಳ್ಳೆ ಗುಣ ಆದ್ರೆ ಕೆಲವೊಮ್ಮೆ ಇದು ಕೆಟ್ಟ ಗುಣ ಕೂಡ..ತೆಗೊಳೋದನ್ನ ಪಾಸಿಟಿವ್ ಆಗ್ ತೆಗೊಂಡ್ರೆ ಒಳ್ಳೇದು ಆದ್ರೆ ನೆಗೆಟಿವ್ ಆಗ್ ತೆಗೊಂಡ್ರೆ ಆ ನಂಬಿಕೆ ಪ್ರಾಣ ತೆಗಿಯೋದ್ರಲ್ಲಿ ಯಾವದೇ ಸಂಶಯನು ಇಲ್ಲ.
ಏನು ಹೇಳ್ತ ಇದ್ದೀನಿ ಅಂತ confuse ಆದ್ರ ಹೌದು ಕೆಲವು ನ್ಯೂಸ್ ನೋಡಿದಾಗ ನಾನು ಇಷ್ಟೇ confuse ಆಗ್ತೀನಿ ಸಹಜ ಕೂಡ.
ಇದು ನೋಡಿ
1. ಕ್ಲಾಸ್ ಅಲ್ಲಿ ಯಾವ್ದೋ ವಿಷಯಕ್ಕೆ ಜಗಳ ಆಸಾಯೋ ಅಗತ್ಯ ಇದೆಯಾ..??ಯಿತು.teacher ಏನೋ ಅಂದ್ರು ಮನೆಗೆ ಬಂದ ಹುಡ್ಗ suicide ಮಾಡ್ಕೊಂಡ.
2. ಎಕ್ಸಾಮ್ಸ್ ರಿಸಲ್ಟ್ ಬಂತು ಫ್ರೆಂಡ್ ಕಾಲ್ ಮಾಡಿ ಫೇಲ್ ಆಗಿದೀಯ ಅಂದ suicide
3.parents phone ಕೊಡ್ಸಲ್ಲ ಅಂದ್ರು suicide
4.ಇಂಗ್ಲಿಷ್ ಬರಲ್ಲ ಫ್ರೆಂಡ್ಸ್ ಮುಂದೆ ಅವಮಾನ ಆಯಿತು ಮುಂದೆ ಹೇಳೋದು ಬೇಡ ನಿಮಗೆ ಗೊತ್ತಾಗಿರತ್ತೆ.
ಈ ಎಲ್ಲ incident ಅಲ್ಲಿ common "suicide". ಆದ್ರೆ ಇದ್ರಲ್ಲಿ ಸಾಯೋ ಒಂದ್ ಅಂಶ ನಿಮಗೆ ಕಾಣ್ತಾ ಇದೆಯಾ ಇಲ್ಲ..!!
exam ಟೈಮ್ ಅಲ್ಲಿ ಫ್ರೆಂಡ್ಸ್ ಕಾಲು ಎಳಿತಾರೆ ಒಂದ್ ಸೆಕೆಂಡ್ think ಮಾಡೋ ಅಷ್ಟು ತಾಳ್ಮೆ ಇಲ್ವಾ..??
ಫೋನ್ ಯಾಕೆ ಕೊಡ್ಸಲ್ಲ ಅಷ್ಟು think ಮಾಡ್ದೆ ಇರೋ ಅಷ್ಟು ಸಣ್ಣವರು ನಾವಲ್ಲ ಅಲ್ವಾ.
ರೀ "ಕಪಿಲ್ ಶರ್ಮ"ನ ನೋಡಿ ಇಂಗ್ಲಿಷ್ ಇನ್ನು importent ಅನ್ಸತ್ತ ಇಲ್ಲ ಮಾತ್ ಆಡೋಕೆ ಬರೋದು importent ಅನ್ಸತ್ತ..??
ಫೇಲ್ ಆದ್ರೆ ಆಗೋಣ ತಪಿಲ್ಲ ನಮಗೆ ಲೈಫ್ ಅಲ್ಲಿ ಯಾರು ಬಂದು world war ಯಾವಾಗ ಆಯಿತು..?
ತಾಜಮಹಲ್ ಯಾರು ಕಟಿಸಿದ್ರು..?? ಅಂತ ಕೇಳಲ್ಲ ಅದನ್ನು ತಿಳ್ಕೊಳ್ಳಿ.
ಧೋನಿ,ಸಚಿನ್,ಶಾರುಖ್,ಕಪಿಲ್,ರಣದೀಪ್ ಅವ್ರೆಲ್ಲ ಯಾಕೆ ದರ್ಶನ ನ ನೋಡಿ ಲೈಟ್ ಬಾಯ್ ಆಗಿ ಬಂದು ಇವತ್ತು ಕರ್ನಾಟಕಲಿ star ಇವ್ರು ಯಾವ ಕಷ್ಟ ನೋಡಿಲ್ಲ ಅಲ್ವಾ..??
ರೀ ಇವತ್ತು star ಅವರು ನಿನ್ನೆ ನಮಗಿಂತ ಕಷ್ಟ ಅವಮಾನ ನೋಡಿದಾರೆ ಆದ್ರೆ ಸೊಲು ಒಪ್ಲಿಲ್ಲ.
ಎಲ್ಲೋ ಸಾಯೋ ಸ್ಟೇಜ್ಗೆಗೆ ಹೋಗಿ ಜೀವಂತ ಇರೋರು ಕಣ್ಣು ಎದುರು ಇದಾರೆ ನೋಡಿ ಅವರನ್ನ.
"ಯುವರಾಜ್ ಸಿಂಗ್" ಅವತ್ತು ಇಲ್ಲ ನಾನು ಬದಕಲ್ಲ ಅನ್ಕೊಂಡ್ರಾ..??
"ಸ್ಟೀವ್ ಜಾಬ್ಸ್" cancer ಇದೆ ಅಂತ ಸುಮನಾಗಿದ್ರೆ Apple ಇಷ್ಟು ಎತ್ತರ ಬೆಳಿತಾ ಇತ್ತ..??
ಮನಿಷಾ ಕೊಯಿರಾಲ ಮತ್ತೆ ಎದುರು ಬಂದು camera face ಮಾಡಿಲ್ವಾ??
ಇವರಿಗೆ ಯಾಕೆ ಲೈಫ್ ಬೇಜಾರಾಗಿಲ್ಲ..??
ಅವರು ಫೇಮಸ್ ಅಂತನ??ಅಲ್ಲ ಅವರಿಗೆ ಅವರ ಲೈಫ್ ಯಾವತ್ತೂ ಸಣ್ಣದು ಅನ್ನಿಸ್ಲಿಲ್ಲ. ಅವರಿಗೆ ಕಂಡ ಲೈಫ್ ನಮಗೆ ಕಾಣಲ್ಲ್ವಾ..!!
90 ವರ್ಷ ಇರೋರು ಕೂಡ ಬದ್ಕೋ ಪ್ರಯತ್ನ ಮಾಡ್ತಾ ಇರ್ತಾರೆ.
ಇದೆಲ್ಲ ನೋಡುವಾಗ ಅನ್ಸಲ್ಲವ ಕಷ್ಟ ಎಲ್ಲರಿಗು ಬರತ್ತೆ ಅಂತ.
ರೀ ಸಾಯೋದು easy..ಸತ್ತು ಏನ್ರಿ ಮಾಡ್ತೀರಾ?? ಫೇಮಸ್ ಆಗ್ತೀರಾ ಖಂಡಿತ ಇಲ್ಲ first ನಾಲ್ಕು ದಿನ ಅಯ್ಯೋ ಅಂತ ಮಾತಾಡ್ಕೋತಾರೆ ಆಮೇಲೆ ನಿಮ್ಮ ಗುಣಗಾನ ಮಾಡ್ತಾರೆ ಮತ್ತೆ ನಾಲ್ಕು ದಿನ ಬೈಕೋತಾರೆ ಅಷ್ಟಕ್ಕೇ ನಿಮ್ಮ 11ne ದಿನ ಬರತ್ತೆ ಬಂದು ಊಟ ಮಾಡ್ಕೊಂಡು ಒಂದೆರಡು ವಡೆ extra ತಿಂದು ನಿಮ್ನ ಮರ್ತೆ ಹೋಗ್ತಾರೆ.
ಈ ಸುಖಕ್ಕೆ ಸಾಯಿಬೇಕಾ ಹೋಗ್ಲಿ ನೀವು ಸತ್ ಮೇಲೆ famous ಆಗೋಕೆ ಅಂತದ್ದು ಏನ್ ಕಿತ್ತು ದಬಾಕಿದಿರ..??
ನೀವು ಸತ್ತು ಯಾವ teacher ಗೆ parents ಗೆ ಬುದ್ದಿ ಕಲ್ಸಲ್ಲ.
ಕಷ್ಟಗಳನ್ನ face ಮಾಡೋ ಧೈರ್ಯ ನಿಮಗೆ ಇಲ್ಲ ಅಂತ ಒಪ್ಕೋತಾಯಿದ್ದೀರ.
ಸಾವು ಅನ್ನೋದು ಬರೀ ಎರಡು ಅಕ್ಷರ ಆದ್ರೆ ಈ ಎರಡು ಅಕ್ಷರದಲ್ಲಿ ಸಾವಿರ ನೋವುಗಳಿರತ್ತೆ.
ಸಾಯೋ ಪ್ರಯತ್ನ ಮಾಡೋ ಪ್ರತಿ ಮೂರ್ಖ ಒಮ್ಮೆ ಹೊರಗೆ ಹೋಗಿ ಜಗತ್ತು ನೋಡಿ.. ಒಂದ್ ದಿನ ಪೂರ್ತಿ ಹೊರಗೆ ಸುತ್ತಿ ಎಲ್ಲರ ಹತ್ರ ಮಾತಾಡಿ ಆಮೇಲೂ ನಿಮಗೆ ಸಾಯಿಬೇಕು ಅನ್ಸಿದ್ರೆ ಖಂಡಿತ ದೇವ್ರು ಕೂಡ ನಿಮ್ನ ತಡಿಯಲ್ಲ ಹೋಗಿ ಹೇಗೆ ಬೇಕೋ ಹಾಗೆ colorfull ಆಗಿ ಸಾಯಿರಿ.
ಆದ್ರೆ ಒಂದ್ ವಿಷ್ಯ ಮರೀಬೇಡಿ ಮೊದಲು ನಿಮ್ನ ನೀವು ಪ್ರೀತ್ಸಿ ನೀವು societyಗೆ ಸಿಕ್ಕಿದ ಒಂದು ಅದ್ಬುತ ಅದನ್ನ ಮರೀಬೇಡಿ ಇಷ್ಟಾದ್ರೂ ಈ ರೋಗಕ್ಕೆ ಬಲಿ ಆಗೋ ಹಾಗೆ ಇದ್ರೆ ನಿಮ್ ಇಷ್ಟ ನಿಮ್ನ ತಡಿಯೋಕೆ ನಾನು ಯಾರು ಅಲ್ಲ ನನ್ನ ಮಾತು ಕೇಳೋಕೆ ನೀವು ಯಾರು ಅಲ್ಲ.
Anup Bhat Nethrakere

Followers

Our Team

Contact us

Name

Email *

Message *