Monday, November 14, 2016

ಹೆಸರಿಲ್ಲದ ಕೆಲವು ಕತೆ ನಿಜ ಅನ್ಸತ್ತೆ.....!!!!

ರಾತ್ರಿ ಸುಮಾರು 12:30 ಆಗಿರಬಹುದು..ಈಗ ತಾನೆ ಮಳೆ ನಿಂತಿದೆ ವಿಚಿತ್ರ ಅಂದ್ರೆ ಅಲ್ಲಿಗೆ ಇರೋದು ಅಲ್ಲಿ ಕಾಣ್ತಾ ಇರೋ ಅದೊಂದೇ ಗೆಸ್ಟ್ ಹೌಸ್."ಏನೇ ಇರ್ಲಿ ರಾತ್ರಿ ಕಳಿಲಿಕ್ಕೆ ಒಂದು ನೆಲೆ ಸಿಗ್ತಲ್ಲ ಅಷ್ಟು ಸಾಕು"
ನಾನು ನಡೀತಾ ಇದ್ರೆ ನನ್ನ ಹೆಜ್ಜೆ ಶಬ್ದದ ಜೊತೆಗೆ ಮಳೆ ನೀರ ಹನಿ ಬಿಳ್ತಾ ಇರೋ ಶಬ್ದ ನಾನೆ ಬೆಚ್ಚುವಂತೆ ಮಾಡಿದ್ದೇನೋ ನಿಜ.
ಕೊನೆಗೂ ಗೆಸ್ಟ್ ಹೌಸ್ ಮುಟ್ಟಿದ್ದು ಆಯಿತು ಮಳೆಗೆ ನೆಂದಿದ್ದೆ ಬಟ್ಟೆ ಎಲ್ಲ ಒದ್ದೆ ಆಗಿತ್ತು ಗೆಸ್ಟ್ ಹೌಸ್ ಒಳಗೆ ಕಾಲಿಟ್ಟಿದ್ದೆ ತುಂಬಾ ಚಳಿ ಅನ್ಸ್ತು infact ಚಳಿ ಜಾಸ್ತಿ ಆಯಿತು ಅಂತಾನೆ ಅನ್ಬೋದು..!ಇದೇನು ವಿಚಿತ್ರ ಇಷ್ಟು ಹೊತ್ತು ಎಲ್ಲ ಸರಿ ಇತ್ತು..!
"ಏನೇ ಇರ್ಲಿ ಯೋಚನೆ ಮಾಡೋ ಸಮಯ ಇದಲ್ಲ ಇಲ್ಲೇ ಇದ್ರೆ ಚಳಿಗೆ ನನ್ನ ಹೆಣ ಬೀಳತ್ತೆ ಅಷ್ಟೇ" ನನ್ನ ಯೋಚನೆಗೆ ನಂಗೆ ನಗು ಬಂತು.
ರಾತ್ರಿ ತುಂಬಾ ಹೊತ್ತು ಆಗಿದೆ ನಿದ್ದೆ ಬರ್ತಾ ಇದೆ ಬೆಳಿಗ್ಗೆ ಎದ್ದು ಬೇಗ ಹೊರಡೋಣ ಅನ್ಕೊಂಡು ಒಳಗೆ ಹೋದೆ.
ಅರೆ..! ಇವನಿಗೆ ಏನ್ ಆಗಿದೆ ಇವನ ಕಣ್ಣಲ್ಲಿ ನಿದ್ದೆ ಕೂಡ ಕಾಣ್ತಾ ಇಲ್ಲ .."sir ಒಂದು ರಾತ್ರಿ ಇಲ್ಲಿರ್ಲಿಕ್ಕೆ ಜಾಗ ಸಿಗತ್ತಾ..?"
ಇವನು ಯಾಕೆ ನನ್ನ ವಿಚಿತ್ರವಾಗಿ ನೋಡ್ತಾ ಇದಾನೆ..
"ಸರಿಯಾಗಿ ಯೋಚನೆ ಮಾಡಿ ಕೇಳ್ತಾ ಇದ್ದೀರಾ..?"
ಇವನು ಯಾಕೋ ತಲೆ ತಿಂತಾನೆ ಅನ್ಸ್ತು ಆದರು ಮಾತ್ ಆಡ್ಸದೆ.."ನಂಗೆ ಚಳಿ ಆಗ್ತಾ ಇದೆ ನೀವು ಮನುಷ್ಯರ ತರ ಕಾಣ್ತಾ ಇಲ್ಲ ಈ ಚಳಿಲಿ ಇಷ್ಟು ಆರಂ ಆಗ್ ಕೂತಿದ್ದಿರ" ಅವನು ತಲೆ ಎತ್ತಿ ನನ್ನ ಮುಖವನ್ನು ಗಂಭೀರವಾಗಿ ನೋಡಿದ ಆ ನೋಟಕ್ಕೆ ಬೆಚ್ಚಿ ಸುಮ್ಮನಾದೆ.ಹೊರಗೆ ಎಲ್ಲೋ ನೋಡ್ತಾ ನಿತ್ಕೊಂಡೆ.
ಆಗ ಅವನೇ "ಕೀ ತೆಗೊಳ್ಳಿ" ಅಂದ ಈಗ ಅವನ ಮುಖ ಅಷ್ಟು ಗಂಭೀರ ಕಾಣಲಿಲ್ಲ. ಕೀ ತೆಗೊಳ್ಳಿ ಅಂದ ಆದ್ರೆ ಕೀ ಕೆಳಗೆ ಇತ್ತು ಕೈಗೆ ಕೊಡಲಿಕ್ಕೆ ಏನು ರೋಗ..?ಈ ಜನಕ್ಕೆ ಅಷ್ಟು ಸೌಜನ್ಯ ಎಲ್ಲಿಂದ ಬರಬೇಕು ಅನ್ಕೊಂಡು ಕೀ ತೆಗೊಂಡು ರೂಂ ಗೆ ಹೋದೆ ಚಳಿ ಯಾಕೋ ಜಾಸ್ತಿನೇ ಆಗ್ತಾ ಇದೆ ಬಟ್ಟೆ ಬದಲಾಯಿಸೋಣ ಅಂತ ಅನ್ಕೊಂಡಾಗ ಅಲ್ಲೇ ಇದ್ದ paper ಗಾಳಿಗೆ ತುಂಬಾನೆ ಶಬ್ದ ಮಾಡ್ತಾ ಇದೆ ಅನ್ಸ್ತು ಸರಿ ಅದು ನನ್ನ ನೋಡು ಅಂತ ಇದೆ ಅಂತ ಅನ್ಸಿ ಅದ್ರ ಹತ್ರ ಹೋಗಿ ನೋಡ್ದೆ ಆರು ವರ್ಷ ಹಳೇ paper ಆದರು ಎಷ್ಟು ಚನಾಗ್ ಇಟ್ಟಿದಾರೆ ಅನ್ಕೊಂಡೆ.
ಮೊದಲ ಪುಟದಲ್ಲೇ ನಾನು ಉಳ್ಕೊಂಡ ಗೆಸ್ಟ್ ಹೌಸ್ ಫೋಟೋ ಮೇಲೆ "ದುರಾಂತ್ಯ ಕಂಡ ಗೆಸ್ಟ್ ಹೌಸ್" ಅಂತ ಇತ್ತು. ಓದಲಿಕ್ಕೆ boring ಅಂತ ಅವನ ಹತ್ರಾನೆ ಕೇಳೋಣ ಅನ್ಕೊಂಡು ಹೊರಗೆ ಬಂದ್ರೆ ಅಸಾಮಿಯ ಪತ್ತೆನೇ ಇಲ್ಲ.."ಈ ರಾತ್ರಿ ಎಲ್ಲಿಗೆ ಹೋದ ಇವನು..?ರೀ ಬನ್ನಿ ಇಲ್ಲಿ ಒಂದ್ನಿಂಶ.."ಯಾರು ಇಲ್ಲ ಈ ಇಡೀ ಗೆಸ್ಟ್ ಹೌಸ್ ನಲ್ಲಿ ನಾನು ಒಬ್ನೇ ಇದ್ದೀನಿ ಸರಿ ಕಾಯೋಣ ಬಂದ್ರೆ ಕೇಳಿ ಆಮೇಲೆ ಮಲ್ಕೊಳ್ಳೋಣ ಅನ್ಕೊಂಡು ಗಡಿಯಾರ ನೋಡ್ತಾ ಕೂತ್ಕೊಂಡೆ.
ಹೊರಗೆ ಮಳೆ ಜೋರಾಗ್ತಾ ಇತ್ತು ಗುಡುಗು ಮಿಂಚಿನ ಶಬ್ದ ಮನಸಿಗ್ಗೆ ಭಯ ಶುರು ಆಯಿತು ಜೊತೆಗೆ 2 ಘಂಟೆ ಅಂತ ಗಡಿಯಾರ ಶಬ್ದ ಮಾಡಿ ಭಯ ಜಾಸ್ತಿ ಮಾಡ್ತು.
"ಇನ್ನು ಇವನಿಗೆ ಕಾಯೋದ್ರಲ್ಲಿ ಅರ್ಥ ಇಲ್ಲ ಮನೆಗೆ ಹೋದ ಅನ್ಸತ್ತೆ ಸುಮ್ನೆ ಕೂರೋಬದ್ಲು ನಾನು ಹೋಗಿ ಓದಿ ನಂತರ ನಿದ್ದೆ ಮಾಡಿದ್ರೆ ಆಯಿತು" ರೂಂ ಸೇರಿದ ಮೇಲೆ ಸ್ವಲ್ಪ ಸಮಾಧಾನ ಅನ್ಸ್ತು ಆದ್ರೆ ಇಡೀ ಗೆಸ್ಟ್ ಹೌಸ್ ನಲ್ಲಿ ನಾನು ಒಬ್ನೇ ಇದ್ದೇನೆ ಅನ್ನೋ ಭಯ ಒಳಗೆ ಇತ್ತು ನಿದ್ದೆ ಅದ್ಯಾವಗಲೋ ಹಾರಿ ಹೋಗಿತ್ತು.
paper ಪುನಃ ನೋಡ್ದೆ ಓದ್ಬೇಕ ಅಂತ ಮನಸಿಗ್ಗೆ ಅನ್ಸ್ತು.. ಆದರು ಓದಿ ಬಿಟ್ರೆ ಮನಸ್ಸು ಹಗುರಾಗತ್ತೆ ಅಂತ ಓದಲಿಕ್ಕೆ ಶುರು ಮಾಡ್ದೆ.
ಒಂದನೇ ಪುಟ ತಿರುವಿ ಎರಡನೇ ಪುಟಕ್ಕೆ ಹೋದೆ ಮಾತೆ ನಿಂತು ಹೋಯಿತು..!
ಅಸ್ಟರಲ್ಲಿ ಅವನು ಬಂದು "sir may i help u" ಅಂತ ಕೇಳದ ಅಷ್ಟೇ ನೆನಪು..

ಬೆಳಿಗ್ಗೆ ಎಚ್ಚರವಾದಾಗ ಅಲ್ಲಿ ಜನ ಸೇರಿದ್ದರು ಸಮಾದಾನ ಆಯಿತು ಜನ ಇದಾರೆ ಅಂತ ಆಗ ನನ್ನ "ದೇಹ"ನ ಪೋಲಿಸ್ ಎತ್ಕೊಂಡು ಹೋಗ್ತಾ ಇದ್ರು..!
ಆಗ ನೆನಪಿಗೆ ಬಂತು ನಡೆದ ಘಟನೆ..
paperನ ಎರಡನೇ ಪುಟದಲ್ಲಿ ಆ ದುರಂತದಲ್ಲಿ ಪ್ರಾಣ ಕಳಕೊಂಡವರ ಭಾವಚಿತ್ರ ಪ್ರಕಟವಾಗಿತ್ತು..
ಮೊದಲ ಚಿತ್ರ ನಂಗೆ ಕೀ ಕೊಟ್ಟ ವ್ಯಕ್ತಿಯದಾಗಿತ್ತು..
ಆಗ ಅವನ ಮುಖ ದರ್ಶನ ನಂಗೆ ಆಗಿತ್ತು ಅದು ನನ್ನ ಹೃದಯ ಬಡಿತ ನಿಲ್ಲಿಸಿ ನನ್ನ ಸಾವಿಗೆ ಕಾರವಾಗಿತ್ತು..!
ಈಗ ಎಲ್ಲ ಅರ್ಥ ಆಗಲಿಕ್ಕೆ ಶುರು ಆಯಿತು..ಗೆಸ್ಟ್ ಹೌಸ್ ಒಳಗೆ ಹೋಗ್ತಾ ಇದ್ದ ಹಾಗೆ ಬದಲಾದ ವಾತಾವರಣ,ಅವನ ಆ ಗಂಭೀರ ನೋಟ,ಹಳ್ಳಿಗರ ಪ್ರಶ್ನೆ "Sir ರಾತ್ರಿ ಹೋಗಲೇ ಬೇಕ..?"
ಆ ಪ್ರಶ್ನೆ, ಆ ವಾತಾವರಣ, ಈ ಕಾಡು ಎಲ್ಲ ನಿಗೂಢ ಅಂತ ಮನಸ್ಸಿನಲ್ಲಿ ಅನ್ಸ್ತು..!

-Anup Bhat

No comments:

Post a Comment

Followers

Our Team

Contact us

Name

Email *

Message *